ಪಲ್ಲವಿ :
M :
ಒಂದೇ ಒಂದು ಸಾಲಲ್ಲಿ ಹೇಳೋ ಪ್ರೀತಿ ಅಲ್ಲಾ
ಕೋಟಿ ಭಾಷೆ ಸಾಲೋದಿಲ್ಲ
ಒಂದೇ ಒಂದು ಹಾಡಲ್ಲಿ ಹಾಡೋ ಕಾವ್ಯ ಅಲ್ಲಾ
ರಾಗ ತಾಳ ಸಾಲೋದಿಲ್ಲ
ಆ ಕಾಳಿದಾಸನು ಆದಿಕವಿ ಪಂಪಾನು
ಕುಮಾರವ್ಯಾಸನು ಕವಿರನ್ನನು
ಹೇಳದಾ ಬರೆಯದಾ
ಭಾವದಾ ಗ್ರಂಥಲೋಕವೇ
ನನ್ನ ಎದೆಯ ಪ್ರೇಮಪದ
F :
ಒಂದೇ ಒಂದು ಸಾಲಲ್ಲಿ ಹೇಳೋ ಪ್ರೀತಿ ಅಲ್ಲಾ
ಕೋಟಿ ಭಾಷೆ ಸಾಲೋದಿಲ್ಲ
M :
ಒಂದೇ ಒಂದು ಹಾಡಲ್ಲಿ ಹಾಡೋ ಕಾವ್ಯ ಅಲ್ಲಾ
ರಾಗ ತಾಳ ಸಾಲೋದಿಲ್ಲ
ಮಮಮ ಪಪ ಮಮಮ ಗಗರಿ ರಿರಿಗಗ ಮಮರಿ ರಿರಿಗಸ ರಿರಿಗಸರಿ ಸಸರಿ ರಿರಿಸ
ಚರಣ 1 :
F :
ಒಂದೊಂದು ಮಾತಲ್ಲು
ಜೇನಂತೆ ಜಿನುಗೋದು
ಸವಿ ಪ್ರೇಮದ ಆಲಾಪದಾ ಮಧುರಾಕ್ಷರಾ…
M :
ಹೇಳುತ್ತಾ ಹೋದಂತೆ
ಏನೇನೋ ಸಾಲೊಲ್ಲಾ
ಸಂವತ್ಸರಾ ಮನ್ವಂತರಾ ಕಲ್ಪಾಂತರಾ…
F :
ನಾನು ನಿನ್ನ ಸೇರಿ
ನಿನ್ನಂತೆ ಆಗಿ ಹೋದೆ
ಪ್ರೇಮವೆಂಬ ಮಾಯೆಯೇ ಸುಂದರಾ…
M :
ಸೀತಾರಾಮ ರಾಧೇಶ್ಯಾಮ ಇಷ್ಟೇ ಒಲವಾ ವ್ಯಾಕರಣ
ಅರ್ಧ ನಾನು ಅರ್ಧ ನೀನು ಸೇರಿ ಸಂಪೂರ್ಣ
F :
ಒಂದೇ ಒಂದು
ಮಮಪಪ ಮಮಪರಿ ಗಗಮ ಪರಿ ಗಗರಿಸ ರಿರಿಗಗ ರಿರಿಸರಿ
ಚರಣ 2 :
F :
ಹೇಗಿತ್ತು ಹೇಳೀಗಾ
ನೀ ನನ್ನ ಕಂಡಾಗ
ಆದಂತಹಾ ರೋಮಾಂಚನಾ ಆ ಕಂಪನಾ..?
M :
ಆನಂದ ಆಶ್ಚರ್ಯ
ಒಂದಾಗಿ ಆದಾಗ
ಬಿಡಿಸೇಳಲು ಹೇಳೆಲ್ಲಿದೆ ಮಾಪ೦ಕನಾ..?
F :
ನಾನು ನೀನು ಒಂದು
ಏಳೇಳು ಜನ್ಮ ಬಂಧು
ಅನ್ನುವಂತ ಭಾವನೆ ಬಾಳಿಗೆ…
M :
ಗೌರಿ ನೀನು ಶಂಕರ ನಾನು ಅರ್ಧನಾರೀ ತತ್ವನೆ
ಶಬ್ದ ನಾದ ಬೇರೆ ಬೇರೆ ಮಾಡೋದು ಹೇಗೆ..?
M :
ಒಂದೇ ಒಂದು ಹಾಡಲ್ಲಿ ಹಾಡೋ ಕಾವ್ಯ ಅಲ್ಲಾ
ರಾಗ ತಾಳ ಸಾಲೋದಿಲ್ಲ
F :
ಒಂದೇ ಒಂದು ಸಾಲಲ್ಲಿ ಹೇಳೋ ಪ್ರೀತಿ ಅಲ್ಲಾ
ಕೋಟಿ ಭಾಷೆ ಸಾಲೋದಿಲ್ಲ
CHORUS :
ಮನಸೇ ನೀನು ರಂಗು ರಂಗೋಲೆ
ಮನಸೇ ನೀನು ತೂಗು ಉಯ್ಯಾಲೆ
ಮನಸೇ ನೀನು ಪ್ರೇಮದಾರಂಭ ಶಾಲೆ
ಒಲವೇ ನೀನು ಜೀವಸಂಚಾರ
ಒಲವೇ ನೀನು ಜೀವನಾಧಾರ
ಒಲವೇ ನೀನು ವೇದವೇದಾಂಗ ಸಾರ…
Song Credits
Song: Ondhe Ondu (From "Brindhavihari")
Singer(s): Hesham Abdul Wahab, V.Nagendra Prasad, K. S. Chithra, Jaskaran Singh
Music: Hesham Abdul Wahab, V.Nagendra Prasad
Label: Aananda Audio Video
Album: Ondhe Ondu (From "Brindhavihari")
Released: 2026
Language: Kannada
Watch Official Video
Thanks for visiting gabrupunjabi.com! If you found any mistakes in the lyrics, please get in touch with us through our Contact Us page. We will correct the mistakes in these lyrics.
Explore the complete lyrics of Ondhe Ondu (From “Brindhavihari”) Lyrics – Hesham Abdul Wahab, V.Nagendra Prasad, K. S. Chithra, Jaskaran Singh | Ondhe Ondu (From “Brindhavihari”) by Hesham Abdul Wahab. Read the full Punjabi song lyrics and dive into the meaning behind this hit track. Perfect for fans of Punjabi music and Hesham Abdul Wahab soulful songs!


